Showing posts with label love expert. Show all posts
Showing posts with label love expert. Show all posts

Friday, April 3, 2020

ಜಗತ್ತಿನ ಅತಿ ಶ್ರೇಷ್ಠ ಲವ್‌ ತಜ್ಞ ಫ್ರಾಯ್ಡ್

a small introduction about the greatest love expert in the world freud


ಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…


1.ಜಗತ್ಪ್ರಸಿದ್ಧ ಮನೋವೈದ್ಯ ಸಿಗ್ಮಂಡ್ ಫ್ರಾಯ್ಡ್ ಮೇ 6, 1856ರಲ್ಲಿ ಆಸ್ಟ್ರಿಯಾದಲ್ಲಿ ಜನಿಸಿದರು. “ಸೈಕೋ ಅನಾಲಿಸಿಸ್‌’ ಎಂಬ ಹೊಸ ಹೊಸದೊಂದು ಚಿಕಿತ್ಸಾವಿಧಾನವನ್ನು ಅವರು ಕಂಡುಹಿಡಿದರು.
2. ಬಾಲ್ಯದಲ್ಲಿ ಸಿಗ್ಮಂಡ್ 6 ವರ್ಷಗಳ ಕಾಲ ಕಪ್ಪೆ ಮತ್ತು ಈಲ್‌ ಮೀನಿನ ಮೆದುಳುಗಳ ಅಧ್ಯಯನದಲ್ಲಿ ಕಳೆದಿದ್ದರು.
3. ಕಾಲೇಜಿನಿಂದ ಪದವಿ ಪಡೆದ ನಂತರ ಫ್ರಾಯ್ಡ್ ಸಮ್ಮೊಹನ ವಿಷಯವಾಗಿ ಅನೇಕ ಪ್ರಯೋಗಗಳನ್ನು ಕೈಗೊಂಡರು.
4. 1899ರಲ್ಲಿ ಅವರು ಬರೆದ “ಇಂಟರ್‌ಪ್ರಿಟೆಷನ್‌ ಆಫ್ ಡ್ರೀಮ್ಸ್‌’ ಪುಸ್ತಕ ವಿವಾದಗಳಿಂದ ಪ್ರಖ್ಯಾತವಾಗಿತ್ತು.
5. ಆತನ ಚಿಕಿತ್ಸಾ ವಿಧಾನಗಳನ್ನು ಆಗಿನ ಕಾಲದ ವೈದ್ಯಲೋಕ ಅನುಮಾನದ ದೃಷ್ಟಿಯಿಂದ ನೋಡಿತ್ತು. ಅದಕ್ಕೆ ಮನ್ನಣೆ ನೀಡಿರಲಿಲ್ಲ.
6. ಇಂಗ್ಲಿಷ್‌ ಸಿನಿಮಾ ತಯಾರಿಕಾ ಕೇಂದ್ರ ಹಾಲಿವುಡ್‌ನ‌ಲ್ಲಿ ಸಿಗ್ಮಂಡ್ ಫ್ರಾಯ್ಡನ ವಿವಾದಾತ್ಮಕ ಥಿಯರಿಗಳು ಪ್ರಸಿದ್ಧಿ ಪಡೆದವು. ಅವುಗಳನ್ನು ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬಿದ್ದರು.
7. 1925ರಲ್ಲಿ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಎಂ.ಜಿ.ಎಂ.ನ ಮುಖ್ಯಸ್ಥರಾಗಿದ್ದ ಸ್ಯಾಮುವೆಲ್‌ ಗೋಲ್ಡ್‌ವಿನ್‌ ಫ್ರಾಯ್ಡರನ್ನು “ಜಗತ್ತಿನ ಅತಿ ಶ್ರೇಷ್ಠ ಲವ್‌ ತಜ್ಞ’ ಎಂದು ಕರೆದಿದ್ದರು.
8. ಬೇಸರವನ್ನು ಹೋಗಲಾಡಿಸಲು ಮತ್ತು ಕೆಲಸದಲ್ಲಿ ತನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಲು ಸಿಗ್ಮಂಡ್ ಫ್ರಾಯ್ಡ್ ಮಾದಕ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದ. ಆದರೆ ಕೆಲ ಸಮಯದ ನಂತರ ಅದರ ದುಷ್ಪರಿಣಾಮವನ್ನು ಅರಿತ ನಂತರ ಆ ವ್ಯಸನದಿಂದ ಹೊರಬಂದಿದ್ದ.
9. ಮಾನಸಿಕ ಸಮಸ್ಯೆಗಳಿಂದ ಬಳಲುವವರ ಚಿಕಿತ್ಸೆಗಾಗಿ ಸಾಕು ಪ್ರಾಣಿಗಳನ್ನು ಬಳಸಿದವರಲ್ಲಿ ಫ್ರಾಯ್ಡ ಮೊದಲಿಗರು.
10. ನೊಬೆಲ್‌ ಪಾರಿತೋಷಕಕ್ಕೆ 12 ಬಾರಿ ನಾಮ ನಿರ್ದೇಶನಗೊಂಡಿದ್ದರು. ಆದರೆ ಒಂದು ಸಲವೂ ಸಿಗಲಿಲ್ಲ. ಅವರ ಚಿಕಿತ್ಸಾ ವಿಧಾನಗಳು ವೈದ್ಯಶಾಸ್ತ್ರಕ್ಕೆ ವಿರುದ್ಧವಾಗಿವೆ ಎಂಬ ಕಾರಣವನ್ನು ನೀಡಲಾಗಿತ್ತು.
ಸಂಗ್ರಹ: ಪ್ರಿಯಾಂಕ