Monday, March 23, 2020

ಕೋವಿಡ್‌ -19 ಪೀಡಿತರಿಗೆ ಹಾಲೆಪ್‌ ಆರ್ಥಿಕ ನೆರವು



ಬುಕಾರೆಸ್ಟ್‌ (ರೊಮೇನಿಯಾ): ಮಾಜಿ ಟೆನಿಸ್‌ ಆಟಗಾರ್ತಿ, ವಿಂಬಲ್ಡನ್‌ ಚಾಂಪಿಯನ್‌ ಸಿಮೋನಾ ಹಾಲೆಪ್‌ ರೊಮೇನಿಯಾದ ಕೋವಿಡ್‌ -19 ಪೀಡಿತರ ನೆರವಿಗೆ ಧಾವಿಸಿದ್ದಾರೆ. ವೈದ್ಯಕೀಯ ಉಪಕರಣಕೊಳ್ಳಲು ಸಹಾಯಹಸ್ತ ಚಾಚುವುದಾಗಿ ತಿಳಿಸಿದ್ದಾರೆ.
“ಇಂತಹ ಸವಾಲಿನ ಸಮಯದಲ್ಲಿ ವೈದ್ಯಕೀಯ ಸಿಬಂದಿ ಪಡುತ್ತಿರುವ ಕಷ್ಟಕ್ಕೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರೂ ಸಾಲದು. ಇಡೀ ವಿಶ್ವವೇ ಕೋವಿಡ್‌ -19 ವಿರುದ್ಧ ಹೋರಾಡುತ್ತಿದೆ. ನಾವೆಲ್ಲ ನೆಮ್ಮದಿಯಿಂದ ಕುಳಿತಿದ್ದರೆ ಅತ್ತ ವೈದ್ಯರು ಸೇರಿದಂತೆ ಎಲ್ಲ ಸಿಬಂದಿ ವರ್ಗದವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. ಇಂಥ ವಿಷಮ ಸ್ಥಿತಿಯಲ್ಲಿ ವೈದ್ಯಕೀಯ ನೆರವಿನ ಅಗತ್ಯ ಬಹಳಷ್ಟಿದೆ. ಅದಕ್ಕಾಗಿ ನಾನು ಆರ್ಥಿಕ ನೆರವಿಗೆ ಮುಂದಾಗಿದ್ದೇನೆ. ನೀವು ನನ್ನೊಂದಿಗೆ ಕೈ ಜೋಡಿಸಿ’ ಎಂದು ಹಾಲೆಪ್‌ ಮನವಿ ಮಾಡಿದ್ದಾರೆ. ರೊಮೇನಿಯಾದಲ್ಲಿ 200ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ -19 ಸೋಂಕು ತಗುಲಿರುವುದು ದೃಢಪಟ್ಟಿದೆ.

No comments:

Post a Comment