ಫ್ಯಾಮಿಲಿ ಪ್ಯಾಕ್
ಏರ್‌ಟೆಲ್, ಜಿಯೋ ಜೊತೆಗಿನ ದರ ಸಮರದಲ್ಲಿ ಗುದ್ದಾಡಿ ಸಾಕಾಗಿ, ಏರ್‌ಟೆಲ್ ತನ್ನ ಪೋಸ್ಟ್‌ಪೇಯ್ಡ ದರಗಳನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಏರ್‌ಟೆಲ್ ಪೋಸ್ಟ್‌ಪೇಯ್ಡ ಪ್ಲಾನ್ ದರ 499 ರೂ. ಗಳಿಂದ ಆರಂಭವಾಗುತ್ತದೆ. ಅದಕ್ಕೆ ಶೇ. 18ರಷ್ಟು ಜಿಎಸ್‌ಟಿ ಸೇರಿಸಿದರೆ ಒಟ್ಟು 589 ರೂ. ಬಿಲ್ ಬರುತ್ತದೆ! ಈ ಪ್ಲಾನ್‌ನಲ್ಲಿ 75 ಜಿಬಿ ಡಾಟಾ ಮತ್ತು ಎಲ್ಲ ಕರೆಗಳು ಅನಿಯಮಿತ ಉಚಿತ ಇರುತ್ತದೆ. ಇಷ್ಟು ಹಣ ತೆರಲು ಕೆಲವರಿಗೆ ಮನಸ್ಸು ಒಪ್ಪದೇ ಇರಬಹುದು.
ಪ್ರತಿ ತಿಂಗಳು ಕೆಲವರಿಗೆ ಇದು ದುಬಾರಿ ಎನಿಸಬಹುದು. ಇಲ್ಲೊಂದು ಪ್ಲಾನ್ ಇದೆ. ನಾಲ್ವರು ಹಂಚಿಕೊಳ್ಳುವುದಾದರೆ ಪ್ರತಿಯೊಬ್ಬರು ತಿಂಗಳಿಗೆ 295 ರೂ. ಪಾವತಿಸಿದರೆ ಸಾಕು. ಆ ಪ್ಲಾನ್ ಹೆಸರು ಪ್ಲಾಟಿನಮ್ 999 ಫ್ಯಾಮಿಲಿ ಪ್ಲಾನ್. ನಾಲ್ವರು ಹಂಚಿಕೊಳ್ಳಬಹುದು.
ಈ ಪ್ಲಾನಿನಡಿ 4 ಸಂಖ್ಯೆಗಳಿಗೆ ಕರೆ ಮತ್ತು ಡಾಟಾ ಮತ್ತು 1 ಸಂಖ್ಯೆಗೆ ಕೇವಲ ಡಾಟಾ ಬರುತ್ತದೆ. 999 ರೂ.ಗೆ ಶೇ.18ರಷ್ಟು ಜಿಎಸ್‌ಟಿ ಸೇರಿದರೆ ಒಟ್ಟು 1180 ರೂ.ಬಿಲ್ ಬರುತ್ತದೆ. ಇದನ್ನು ನಾಲ್ವರು ತಲಾ 295 ರೂ.ನಂತೆ ಹಂಚಿಕೊಳ್ಳಬಹುದು. ಅದು ಹೇಗೆ ಎಂದರೆ, ಒಬ್ಬ ಏರ್‌ಟೆಲ್ ಬಳಕೆದಾರ ಈ ಪ್ಲಾನನ್ನು ಹಾಕಿಸಿಕೊಳ್ಳುವಾಗ ಇತರೆ ಮೂವರು ಏರ್‌ಟೆಲ್ ಬಳಕೆದಾರರ ನಂಬರ್‌ಗಳನ್ನು ಎಂಟ್ರಿ ಮಾಡಬೇಕು. ಆಗ, ಈ ಪ್ಲಾನ್ ಅವರಿಗೂ ಅನ್ವಯವಾಗುತ್ತದೆ.
ಎಷ್ಟು ಡಾಟಾ ಸಿಗುತ್ತೆ? : ಈ ಪ್ಲಾನ್‌ನಲ್ಲಿ ಒಟ್ಟು 150 ಜಿಬಿ ಡಾಟಾ ಪ್ರತಿ ತಿಂಗಳು ಸಿಗುತ್ತದೆ ಅಲ್ಲದೇ ಪ್ರತಿ ಹೆಚ್ಚುವರಿ ನಂ.ಗೆ ಹೆಚ್ಚುವರಿಯಾಗಿ ತಲಾ 10 ಜಿ.ಬಿ. ಡಾಟಾ ದೊರಕುತ್ತದೆ. ಅಂದರೆ ನಾಲ್ಕು ಸಂಖ್ಯೆಯಿಂದ ಒಟ್ಟು 180 ಜಿಬಿ ಡಾಟಾ ಪ್ರತಿ ತಿಂಗಳು ಸಿಗುತ್ತದೆ. 180 ಜಿ.ಬಿ. ಒಳಗೆ ಯಾರು, ಎಷ್ಟು ಡಾಟಾ ಬೇಕಾದರೂ ಬಳಸಬಹುದು. ತಿಂಗಳಾಂತ್ಯದಲ್ಲಿ 180 ಜಿ.ಬಿಯಲ್ಲಿ ಉಳಿದರೆ, ಅಷ್ಟು ಡಾಟಾ ಕ್ಯಾರಿ ಫಾರ್ವರ್ಡ್ ಆಗುತ್ತದೆ. ಅಂದರೆ ಮುಂದಿನ ತಿಂಗಳ 180 ಜಿಬಿಗೆ ಸೇರಿಕೊಳ್ಳುತ್ತದೆ.
ಕೆ.ಎಸ್. ಬನಶಂಕರ ಆರಾಧ್ಯಫ್ಯಾಮಿಲಿ ಪ್ಯಾಕ್

No comments:
Post a Comment