Tuesday, March 24, 2020

ಕ್ರೇಟಾ ದಿ ಗ್ರೇಟ್‌!

                                                                  ಕ್ರೇಟಾ ದಿ ಗ್ರೇಟ್‌!

Hyundai company has launched its 2nd tier SUV cars with more than fifty features in it

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಹುಂಡೈ ಕಂಪನಿಯ ಕ್ರೇಟಾ ಕಾರು ಸೇರಿದಂತೆ, ಹೊಸ ಶ್ರೇಣಿಯ ಕಾರುಗಳನ್ನು ಸಂಸ್ಥೆ ಅನಾವರಣಗೊಳಿಸಿದೆ. ಮೊದಲ ಶ್ರೇಣಿಯ ಯಶಸ್ಸಿನ ಆಧಾರದ ಮೇಲೆ, ಇದೀಗ 2ನೇ ಶ್ರೇಣಿಯ ಎಸ್‌ಯುವಿಯನ್ನು ಅನಾವರಣ ಮಾಡಲಾಗಿದೆ. ಈ ಕಾರಿನಲ್ಲಿ 50ಕ್ಕೂ ಹೆಚ್ಚು ಸವಲತ್ತುಗಳನ್ನು ಅಳವಡಿಸಲಾಗಿದೆ.
ವಾಯ್ಸ ಕಂಟ್ರೋಲ್‌ : 
ಭಾರತದ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಈ ಕಾರನ್ನು ರೂಪಿಸಲಾಗಿದೆ. ಹೀಗಾಗಿ, ಓಡಿಸುವಾಗ ಉತ್ತಮ ಫೀಲ್‌ ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಕಾರಿನಲ್ಲಿ ಮುಖ್ಯವಾಗಿ ಧ್ವನಿ ನಿಯಂತ್ರಣ ವ್ಯವಸ್ಥೆಯನ್ನು (ವಾಯ್ಸ ಕಂಟ್ರೋಲ್‌) ಅಳವಡಿಸಲಾಗಿದೆ. “ಹೆಲೋ ಬ್ಲೂ ಲಿಂಕ್‌’ ಎಂದು ಹೇಳಿ ವಾಹನಗಳಲ್ಲಿನ ಸವಲತ್ತುಗಳನ್ನು ನಿಯಂತ್ರಿಸಬಹುದಾಗಿದೆ.
ಬೋಸ್‌ ಸೌಂಡ್‌ ಸಿಸ್ಟಮ್‌ : 
ಕಾರಿನ ಒಳಾಂಗಣವನ್ನೂ ಅತ್ಯಂತ ಉತ್ಕೃಷ್ಟವಾಗಿ ರೂಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 26.03 ಸೆಂ.ಮೀ. ಅಗಲದ ಎಚ್‌.ಡಿ ಇನ್ಫೋಟೈನ್‌ಮೆಂಟ್‌ ವಿತ್‌ ಬ್ಲೂ ಲಿಂಕ್‌, 17.78 ಸೆ.ಮೀ. ಸೂಪರ್‌ ವಿಷನ್‌ ಕ್ಲಸ್ಟರ್‌ ವಿತ್‌ ಡಿಜಿಟಲ್‌ ಡಿಸ್‌ಪ್ಲೇ, 8 ಸ್ಪೀಕರ್‌ಗಳ ಬೋಸ್‌ ಪ್ರೀಮಿಯಂ ಸೌಂಡ್‌ ಸಿಸ್ಟಮ…, ಆಂಡ್ರಾಯ್ಡ್  ಆಟೋ, ಆಪಲ್‌ ಕಾರ್‌ ಪ್ಲೇ ಫೀಚರ್‌ಗಳೂ ಇದರಲ್ಲಿವೆ.
ಐದು ಪವರ್‌ ಟ್ರೈನ್‌ ಆಯ್ಕೆ : 
– 1.5 ಲೀ. ಎಂಪಿಐ (ಬಿಎಸ್‌6) ಪೆಟ್ರೋಲ್(6ಎಂಟಿ/ ಐವಿಟಿ)
– 1.5 ಲೀ. ಯು2ಸಿಆಡಿರ್‌ಐ (ಬಿಎಸ್‌6) ಡೀಸೆಲ್(6ಎಂಟಿ/ 6ಎಟಿ)
– 1.4 ಲೀ. ಕಪ್ಪ ಟರ್ಬೋ ಜಿಡಿಐ ಪೆಟ್ರೋಲ್ (ಬಿಎಸ್‌6) (7ಡಿಸಿಟಿ ಕ್ಲಚ್‌ ಟ್ರಾನ್ಸ್ ಮಿಷನ್‌)
ಮೈಲೇಜ್‌ : 
ಪೆಟ್ರೋಲ್‌ ಮಾದರಿಯ ವಾಹನ ಅಂದಾಜು 16.8 ಮೈಲೇಜ್‌ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ, ಡೀಸೆಲ್‌ ಮಾದರಿ 18.5ರಿಂದ 21.4 ಮೈಲೇಜ್‌ ನೀಡಲಿದೆ ಎಂದು ಹೇಳಿದೆ.
ಟಾಪ್‌ ಫೀಚರ್ : 
– ಟಾಪ್‌ ವೇರಿಯಂಟ್‌ನಲ್ಲಿ 6 ಏರ್‌ ಬ್ಯಾಗ್‌
– ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌
– ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌
– ಹಿಲ್‌ ಸ್ಟಾರ್ಟ್‌ ಅಸ್ಟ್ಕಂಟ್ರೋಲ್‌
– ರಿಯರ್‌ ಡಿಸ್ಕ್ ಬ್ರೇಕ್ಸ್
– ರಿರ್ಯ ಕ್ಯಾಮೆರಾ ವಿತ್‌ ಸ್ಟೀರಿಂಗ್‌ ಅಡಾಪ್ಟಿವ್‌ ಪಾರ್ಕಿಂಗ್‌ ಗೈಡ್‌ ಲೈನ್ಸ್- ಐಎಸ್‌ಒಎಫ್ಐಎಕ್ಸ್ (ಮಕ್ಕಳ ಸೀಟ್‌ ಸುರಕ್ಷತೆ)
– ಬರ್ಗಲರ್‌ ಅಲಾರ್ಮ್

ಟೊಯೊಟಾ ಇನ್ನೋವಾ ಲೀಡರ್‌ಶಿಪ್‌ ಆವೃತ್ತಿ : 
ಕಳೆದ 15 ವರ್ಷಗಳಲ್ಲಿ ಭಾರತದಲ್ಲಿನ ಎಂಪಿವಿ ವಿಭಾಗದಲ್ಲಿ ಅಗ್ರಗಣ್ಯನಾಗಿ ಬೆಳೆಯುತ್ತಿರುವ ಇನ್ನೋವಾ ಕ್ರಿಸ್ಟಾ, ತನ್ನ ಲೀಡರ್‌ಶಿಪ್‌ ಆವೃತ್ತಿಯ ಹೊಸ ಕಾರನ್ನು ಅನಾವರಣ ಮಾಡಿದೆ. 5 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್ ಮಿಷನ್‌, 7 ಸೀಟರ್‌ಗೆ ಹೊಂದಿಕೆಯಾದ 2.4 ಲೀ. ಡೀಸೆಲ್ (ಬಿಎಸ್‌6)ಎಂಜಿನ್‌ ಸೌಲಭ್ಯ ಈ ಎಂಪಿವಿಗೆ ಇದೆ. ಅತ್ಯಾಕರ್ಷಕ ಡ್ಯುಯಲ್‌ ಟೋನ್‌ ಬಣ್ಣದಲ್ಲಿ ಲಭ್ಯವಿದೆ. ವೈಟ್‌ ಪರ್ಲ್ ಕ್ರಿಸ್ಟಲ್‌ ಆ್ಯಟಿಟ್ಯೂಡ್‌ ಬ್ಲ್ಯಾಕ್‌ನೊಂದಿಗೆ ಶೈನ್‌ ಮತ್ತು ವೈಲ್ಡ್ ಫೈರ್‌ ರೆಡ್‌ ವಿತ್‌ ಆ್ಯಟಿಟ್ಯೂಡ್‌ ಬ್ಲ್ಯಾಕ್‌ ಸಂಯೋಜನೆಯೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ.

-ಸೋಮಶೇಖರ ಸಿ.ಜೆ.ಕ್ರೇಟಾ ದಿ ಗ್ರೇಟ್‌!

No comments:

Post a Comment