Saturday, March 28, 2020

ಮಕ್ಕಳಿಗೆ ಸ್ವಚ್ಛತೆ ಪಾಠ

cleanliness lesson for children at home



ಮಕ್ಕಳಿಗೆ ಪರೀಕ್ಷೆಗಳು ನಡೆಯುವ ಮುನ್ನವೇ ಕೊರೊನಾ ಕಾರಣದಿಂದ ರಜೆ ಸಿಕ್ಕಿಬಿಟ್ಟಿದೆ. ಇದು ನೆಮ್ಮದಿಯ ವಿಷಯವಾದರೂ, ಮಕ್ಕಳು ಬಹುಬೇಗನೆ ರೋಗ ರುಜಿನಗಳಿಗೆ ತುತ್ತಾಗುವುದರಿಂದ, ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಕೇವಲ ಕೊರೊನಾ ಅಷ್ಟೇ ಅಲ್ಲ; ಸಾಂಕ್ರಾಮಿಕ ರೋಗಗಳು ಹಾಗೂ ಅವು ಹರಡುವ ರೀತಿಯನ್ನು ಮಕ್ಕಳಿಗೆ ವಿವರಿಸುವುದು, ಸ್ವಚ್ಛತೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ.
-ಪ್ರತಿನಿತ್ಯ ಶಾಲೆಯಿಂದ ಬಂದಕೂಡಲೇ ಕೈ-ಕಾಲು ತೊಳೆದುಕೊಳ್ಳುವ ಅಗತ್ಯವನ್ನು ಮನಗಾಣಿಸಿ.
– ಊಟಕ್ಕೂ ಮೊದಲು ತಪ್ಪದೇ ಕೈ ತೊಳೆಯುವ ಅಭ್ಯಾಸ ಬೆಳೆಸಿ.
-ಮಕ್ಕಳ ಕಿಸೆ/ ಬ್ಯಾಗ್‌ನಲ್ಲಿ ಕರವಸ್ತ್ರ ಇಡಿ.
-ಈಗ ಕೊರೊನಾ ಹಬ್ಬುತ್ತಿರುವುದರಿಂದ, ಕೆಮ್ಮಿದಾಗ, ಸೀನಿದಾಗ ತಪ್ಪದೆ ಸೋಪು/ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಲು ಹೇಳಿ.
-ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಕಡ್ಡಾಯವಾಗಿ ಅಡ್ಡ ಹಿಡಿಯಲು ತಿಳಿಸಿ ಕೊಡಿ.
-ಹೊರಗೆ ಹೊರಡುವಾಗ ಮುಖಕ್ಕೆ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬೇಕು.
-ಮನೆಯಿಂದ ಹೊರಗೆ ಹೋಗುವುದಿದ್ದರೆ ಸ್ಯಾನಿಟೈಸರ್‌ ಜೊತೆಗಿರಲಿ. ತಿನ್ನುವಾಗ, ಮುಖ-ಕಣ್ಣು ಮುಟ್ಟಿಕೊಳ್ಳುವ ಮುನ್ನ ಕೈ ತೊಳೆಯಲು ಹೇಳಿ.
-ಬಸ್‌, ರೈಲು, ಮೆಟ್ರೋನಂಥ ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವಾಗ ಜನರಿಂದ ಆದಷ್ಟು ದೂರ ನಿಲ್ಲಲು, ಸೀಟು, ಹ್ಯಾಂಡಲ್‌ ಅಥವಾ ಇತರೆ ವಸ್ತುಗಳನ್ನು ಮುಟ್ಟಬಾರದೆಂದು ತಿಳಿಸಿ.
-ಬಳಸಿದ ಟಿಶ್ಯೂ ಪೇಪರ್‌ ಅನ್ನು ಅತ್ತಿತ್ತ ಎಸೆಯದೆ, ಕಸದಬುಟ್ಟಿಯಲ್ಲೇ ಎಸೆಯಲು ಹೇಳಿ.
– ಪಾದರಕ್ಷೆ ಧರಿಸದೆ ಹೊರಗೆ ಅಡ್ಡಾಡದಂತೆ ತಡೆಯಿರಿ.
-ಬೀದಿ ಬದಿ ಮಾರುವ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಲು ಕೊಡಬೇಡಿ.
ಈ ಸ್ವಚ್ಛತಾ ಕ್ರಮಗಳು ಕೇವಲ ಕೊರೊನಾ ಅಷ್ಟೇ ಅಲ್ಲ, ಎಲ್ಲ ಬಗೆಯ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ದೂರ ಇಡುತ್ತವೆ. ಹಾಗಾಗಿ, ಸ್ವತ್ಛತೆಯ ಈ ಪರಿಪಾಠಗಳನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ರೂಢಿಸಿ.

No comments:

Post a Comment