Showing posts with label health. Show all posts
Showing posts with label health. Show all posts

Wednesday, August 5, 2020

5 high calorie food items that are actually good for health


5 high calorie food items that are actually good for health

Calories are basically heat energy, wherein two units of energy equal one calorie. They are necessary to maintain the body’s vital functions or basic metabolic rate.

Increase intake of calories for a prolonged period of time can lead to weight gain and other diseases. But there are some of the food items that are high in calorie but good for health.

Read More ... 5 high calorie food items that are actually good for health

Friday, July 3, 2020

Does wearing a mask pose any health risks?

Does wearing a mask pose any health risks?



Austin (US): No, not for most people. Babies and toddlers should not wear masks because they could suffocate. The same goes for anyone who has trouble removing a mask without help.
Others can wear masks without risking their health, according to experts, despite false rumours to the contrary.
In areas where COVID-19 is spreading, health experts agree that wearing masks or other face coverings in public helps reduce the risk of spreading the virus when people can”t socially distance by staying 6 feet apart.
The coronavirus mainly spreads through droplets that are emitted when people talk, laugh, sing, cough and sneeze.
Masks lower the likelihood of those droplets reaching other people. Even if you don”t have symptoms, you could be carrying the virus and could spread it.
When it’s humid outside, it could feel like it’s harder to breathe if you”re not used to wearing a mask, said Benjamin Neuman, a professor of biology at Texas A&M University-Texarkana.
But he said masks don’t meaningfully decrease oxygen in the body. “The body is quite good at adjusting to keep oxygen levels where they need to be,” he said.
There’s also no evidence that the use of masks causes fungal or bacterial infections, according to Davidson Hamer, an infectious disease expert at Boston University.
Disposable face masks are meant to be used once, then thrown in the garbage. With cloth masks, it’s a good idea to wash them regularly.
Wearing a mask may be uncomfortable, but health officials say you should resist any urge to touch your face. That could bring germs from your hands into your nose, mouth or eyes.

Saturday, May 2, 2020

5 health benefits of Deep breathing exercises

5 health benefits of Deep breathing exercises


Deep breathing exercises can decrease stress, relax your mind, body and can help you sleep better. By breathing deeply, you allow the diaphragm to drop downward, the rib cage to expand and create more space for the lungs to inflate.
Here are 5 benefits of deep breathing
1.One of the health benefits of breathing deeply is that it helps to release tension in the diaphragm and primary breathing muscles, relieving many long-term respiratory issues such as asthma and breathlessness.
2.By taking deep breaths, your heart rate slows, more oxygen enters our blood stream and ultimately communicates with the brain to relax.
3.The movements of the diaphragm during the deep breathing exercise massages the stomach, small intestine, liver and pancreas
4.When your blood is fully oxygenated, it carries and absorbs nutrients and vitamins more efficiently. Essentially, the cleaner the blood, the harder it is for illnesses to stay put in your system.
5.The benefits of deeper breathing include increased blood flow in the digestive tract, which encourages intestinal action and improves overall digestion

Monday, April 27, 2020

5 tips to protect your hearing health

5 tips to protect your hearing health




Raising awareness regarding ear health is very important because once you damage your hearing ability, it is gone for good.
Here are ways you can protect your hearing health
Stop using ear buds to clean wax out of your ear canal because ears are self-cleaning organs, and wax stops dust and other harmful particles from entering the canal and also ear buds can damage your ear drum.
Keep your ears dry. Excess moisture can allow bacteria to enter and attack the ear canal. This can cause swimmer’s ear or other types of ear infections, which can be dangerous for your hearing ability.
If your ear is exposed to loud noises for a long period of time for eg, concerts, clubs etc. Give rest to your ears, either by using earplugs or stepping out for a while.
Cardio exercises like walking, running, or cycling gets the blood pumping to all parts of your body, including the ears.
Get regular check-ups done in order to recognize signs of hearing loss and take action as soon as possible.

Wednesday, April 8, 2020

4 Herbal infusions for Health and Happiness

four herbal infusions for good health and lifestyle


Most of the people start their day with tea and coffee but if you want a natural health booster, then here is a list of a few herbal infusions that can improve your lifestyle and overall well-being.
Ginger
Fresh ginger is good for nausea, motion and morning sickness. Ginger tea mixed with lemon and honey is great for comfort.
Fennel
Fennel seeds can stimulate a slow digestive system and soothe cramps. It can also reduce nicotine cravings.
Lavender
Lavender helps with insomnia, anxiety, stress and depression and the aroma of lavender is known to have a soothing effect.
Chamomile
It is known for its soothing and calming properties and is anti-inflammatory. Chamomile calms the digestive and nervous systems.

4 Natural ways to sharpen your memory

four natural health ways to sharpen your memory



Be it vehicle keys or grocery list most of the people forget things occasionally and assume it to be completely normal but memory loss is nothing to take lightly.
It is said that memory loss at young age can disrupt the functions of our brain. It is said that it can affect our concentration power and also makes it a bit harder to learn new things
Here are a few tips to sharpen your memory
Meditation
It is said that meditation increases gray matter in the brain which contains neuron cell bodies which impacts memory.
Less sugar intake
Eating sugar can lead to poor memory and reduced brain volume. Less sugar intake will not only improve memory but will also improve overall health.
Proper sleep
It is said that if you are sleep deprived, you could be negatively impacting your memory.Hence, it is important to get enough sleep.
Exercise
According to a recent study, exercise increases the secretion of neuroprotective proteins and improves the growth and development of neurons, leading to improved brain health.

Saturday, March 28, 2020

ಬೆಲ್ಲ ಆರೋಗ್ಯಕ್ಕೆ ಎಷ್ಟು ಮುಖ್ಯ? ಬೆಲ್ಲದಲ್ಲಿದೆ ಹಲವು ಆರೋಗ್ಯಕರ ಗುಣ!

health benefits of jaggery


ಬೆಲ್ಲ ನೈಸರ್ಗಿಕ ಸಿಹಿಕಾರಕವಾಗಿದ್ದು ನಮ್ಮ ಹಲವಾರು ತಿನಿಸುಗಳಿಗೆ ಸಿಹಿಯನ್ನು ನೀಡುವ ಮೂಲವಸ್ತುವಾಗಿದೆ. ನೋಡಲಿಕ್ಕೆ ಸಕ್ಕರೆಯಂತೆ ಬೆಳ್ಳಗಿರದೇ ನುಣ್ಣಗೂ ಇರದೇ ಇರುವ ಕಾರಣಕ್ಕೆ ಹಿಂದಿದ್ದ ಮನ್ನಣೆ ಈಗ ಸಿಗುತ್ತಿಲ್ಲವಾದರೂ ಬೆಲ್ಲದಲ್ಲಿ ಅಡಕಗೊಂಡಿರುವ ಆರೋಗ್ಯಕರ ಪ್ರಯೋಜನಗಳೇನೂ ಕಡಿಮೆಯಾಗಿಲ್ಲ. ಸಾವಯವ ವಿಧಾನದಲ್ಲಿ ತಯಾರಿಸಲಾದ ಬೆಲ್ಲದಲ್ಲಿ ಯಾವುದೇ ರಾಸಾಯನಿಕಗಳಿರದ ಕಾರಣ ಸಕ್ಕರೆ ಅಥವಾ ಸಿಹಿಯ ಅಗತ್ಯವಿರುವಲ್ಲೆಲ್ಲಾ ಬೆಲ್ಲವನ್ನೇ ಬಳಸುವುದು ಆರೋಗ್ಯಕರವಾಗಿದೆ.
ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ
ಬೆಲ್ಲದಲ್ಲಿ ವಿಟಮಿನ್ ಗಳು ಹಾಗೂ ಖನಿಜಗಳು ಅಧಿಕ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸಲು ಹಾಗೂ ತನ್ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ.
ತೂಕ ಇಳಿಕೆಗೆ
ತೂಕ ಇಳಿಸಬೇಕೆಂದರೆ ಸಕ್ಕರೆಯನ್ನೇ ತಿನ್ನಬಾರದು ಎಂದು ಹೇಳುತ್ತಾರೆ, ಹಾಗಾದರೆ ಬೆಲ್ಲ ತಿನ್ನಬಹುದೇ? ವಾಸ್ತವವಾಗಿ ಬೆಲ್ಲದಲ್ಲಿರುವ ಸಕ್ಕರೆಯ ಅಂಶಕ್ಕಿಂತಲೂ ಇತರ ಪೋಷಕಾಂಶಗಳು ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೇ ರಕ್ತ ಮತ್ತು ಜೀರ್ಣಾಂಗಗಳನ್ನು ಶುದ್ದೀಕರಿಸಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.
ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುತ್ತದೆ
ಬೆಲ್ಲದಲ್ಲಿ ಪೊಟ್ಯಾಶಿಯಂ ಸಹಿತ ಹಲವಾರು ಪ್ರಮುಖ ಖನಿಜಗಳಿವೆ. ಇವು ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ದೇಹದ ಯಾವುದೇ ಕ್ರಿಯೆ ಜರುಗಲು ನೀರು ಅಗತ್ಯವಾಗಿದ್ದು ತೂಕ ಇಳಿಕೆಗೂ ಅಂದರೆ, ಕೊಬ್ಬಿನಾಂಶವನ್ನು ಬಳಸಿಕೊಳ್ಳಲೂ ನೀರು ಅಗತ್ಯವಾಗಿದ್ದು ಈ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವು ನೀಡುತ್ತದೆ. ಹಾಗಾಗಿ ಬೆಲ್ಲವನ್ನು ನಿತ್ಯವೂ ಮಿತಪ್ರಮಾಣದಲ್ಲಿ ಸೇವಿಸುವುದು ಉತ್ತಮವಾಗಿದೆ
ಬೆಲ್ಲದ ಕಂಬರಕಟ್ಟು (ಚಿಕ್ಕಿ) ನೆಲಗಡಲೆ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ತಯಾರಿಸಿದ ಚಿಕ್ಕಿ ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿ ಎಲ್ಲೆಡೆಯೂ ಅಗ್ಗದ ದರದಲ್ಲಿ ಲಭಿಸುತ್ತದೆ. ನಿತ್ಯವೂ ಕೊಂಚ ಪ್ರಮಾಣದಲ್ಲಿ ಚಿಕ್ಕಿಯನ್ನು ಸೇವಿಸಬಹುದು. ವಿಶೇಷವಾಗಿ ಚಳಿಗಾಲದಲ್ಲಿ ದೇಹಕ್ಕೆ ಈ ಬೆಲ್ಲದಿಂದ ಹೆಚ್ಚಿನ ಪ್ರಯೋಜನವಿದೆ.
ಬೆಲ್ಲವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಆದ್ದರಿಂದ ಇದು ರಕ್ತದೊತ್ತಡ ಇರುವವರಿಗೆ ಉತ್ತಮ ಮನೆ ಮದ್ದು ಹೌದು.
ಊಟದ ನಂತರ ಸಣ್ಣ ಬೆಲ್ಲದ ತುಣುಕನ್ನು ತಿಂದರೆ ಜೀರ್ಣಶಕ್ತಿಗೆ ಇದು ಸಹಾಯ ಮಾಡುತ್ತದೆ. ಜೀರ್ಣಶಕ್ತಿ ಪ್ರಕ್ರಿಯೆ ಸುಗಮವಾಗುವುದರಿಂದ ಅಸಿಡಿಟಿ, ತೇಗು, ಗ್ಯಾಸ್​ ಟ್ರಬಲ್​ನಿಂದ ಮುಕ್ತಿ ಸಾಧ್ಯ.
ಮಲಬದ್ಧತೆಗೆ ಬೆಲ್ಲ ಉತ್ತಮ ಪರಿಹಾರ. ಇದಕ್ಕೆ ಬೆಲ್ಲದಲ್ಲಿರುವ ಫೈಬರ್​ ಅಂಶವೇ ಕಾರಣ.
ಬೆಲ್ಲದ ಉಪಯೋಗದಿಂದ ಯಕೃತ್​ಗೂ ಉತ್ತಮ ಫಲಕಾರಿ. ಇದರೋಲಗಿನ ಜಿಂಕ್​ ಅಂಶ ಯಕೃತ್​ನ್ನು ಸ್ವಚ್ಛಗೊಳಿಸುತ್ತದೆ. ಆಯುರ್ವೇದದಲ್ಲಿ ಬೆಲ್ಲವನ್ನು ರಕ್ತ ಶುದ್ಧಿಗೆ ಮತ್ತು ಯಕೃತ್​ ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು.
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾದ ಕೆಮ್ಮು, ಶೀತ, ಜ್ವರದಿಂದ ರಕ್ಷಣೆ ಸಾಧ್ಯ. ಒಂದು ಲೋಟ ನೀರಿಗೆ ಒಂದು ಟೀ ಚಮಚದಷ್ಟು ಬೆಲ್ಲದ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಶೀತ, ನೆಗಡಿ, ಬರುವುದನ್ನು ತಪ್ಪಿಸಬಹುದು.
ಬೆಲ್ಲವು ಶ್ವಾಸಕೋಶಗಳ ಸ್ವಚ್ಛತೆಗೊಳಿಸುತ್ತದೆ. ಇದರಿಂದ ಅಸ್ತಮಾ, ನ್ಯುಮೋನಿಯಾಗಳನ್ನು ಉಪಶಮನಗೊಳಿಸಬಹುದು.
ದೇಹದೊಳಗಿನ ಉಷ್ಣಾಂಶದ ಸಮತೋಲಕ್ಕೆ ಚಳಿಗಾಲದಲ್ಲಿ ಬೆಲ್ಲ ಸಹಕಾರಿ. ಕಬ್ಬಿಣಾಂಶ, ಜಿಂಕ್​, ಮ್ಯಾಗ್ನೇಸಿಯಂ ಮತ್ತು ಪ್ರಾಸ್ಪರಸ್​ನಂತಹ ಅಂಶಗಳು ಉಷ್ಣವನ್ನು ನಿಯಂತ್ರಿಸುತ್ತವೆ.
ಬೆಲ್ಲದೊಳಗಿನ ಕಬ್ಬಿಣಾಂಶವು ಗರ್ಭಿಣಿಯರಿಗೆ, ಅನಿಮಿಯಾದಿಂದ ಬಳಲುತ್ತಿರುವವರಿಗೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್​ ಕಡಿಮೆ ಇರುವವರಿಗೆ ಉಪಯುಕ್ತ.

ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತೆ…ಮೀನಿನಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಗೊತ್ತಾ!

Health benefits of fish



ಪ್ರಕೃತಿ ನಮಗೆ ನೀಡಿರುವಂತಹ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದು. ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ. ಮೀನು ತುಂಬಾ ಆರೋಗ್ಯಕರ ಆಹಾರ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿಣ, ಸತು, ಮೆಗ್ನಿಶಿಯಂ, ಅಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ.
ಹೃದಯ ಕಾಯಿಲೆ ಸಮಸ್ಯೆ ಕಡಿಮೆ ಮಾಡುವುದು:
ಮೀನುಗಳಲ್ಲಿ ಸ್ಯಾಚುರೇಟೆಡ್ ಫ್ಯಾಟ್‌ಗಳು ಇಲ್ಲದಿರುವ ಕಾರಣ ಇವುಗಳ ಸೇವನೆಯಿಂದ ಮನುಷ್ಯನ ಹೃದಯಕ್ಕೆ ಯಾವುದೇ ಬಗೆಯ ತೊಂದರೆಗಳು ಉಂಟಾಗುವುದಿಲ್ಲ. ಬದಲಿಗೆ ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ. ಇದಕ್ಕೆ ಕಾರಣ ಮನುಷ್ಯನ ಹೃದಯದ ಆರೋಗ್ಯವನ್ನು ಹಾಳು ಮಾಡುವ ಕೊಲೆಸ್ಟ್ರಾಲ್ ಅಂಶವನ್ನು ಮೀನುಗಳ ದಿನ ನಿತ್ಯ ಸೇವನೆಯಿಂದ ದೂರ ಇಡಬಹುದು.
ವಿಟಮಿನ್ ಡಿ ಮೂಲ:
ಮೀನಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಇದು ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತೀ ಅಗತ್ಯ.
ಸ್ಮರಣಶಕ್ತಿ ವೃದ್ಧಿ:
ಮೀನುಗಳ ಸೇವನೆಯಿಂದ ಮಿದುಳಿನ ಬೆಳವಣಿಗೆಯಾಗಿ ಸ್ಮರಣಶಕ್ತಿ ವೃದ್ಧಿಗೆ ಸಹಕಾರಿಯಾಗಿದೆ. ಇದು ಮಕ್ಕಳಿಗೆ ಬಹಳ ಉಪಯುಕ್ತ.
ಖಿನ್ನತೆ ಕಡಿಮೆ ಮಾಡುವುದು:
ಮೀನು ಮತ್ತು ಮೀನಿನ ಎಣ್ಣೆಯು ಖಿನ್ನತೆ ದೂರ ಮಾಡುವುದು. ಇದು ಖಿನ್ನತೆಯ ಲಕ್ಷಣವನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯ ಸುಧಾರಿಸುವುದು.
ದೃಷ್ಟಿ ಸುಧಾರಣೆ:
ಮೀನಿನಲ್ಲಿ ಇರುವ ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾಕೆಂದರೆ ಮೆದುಳು ಮತ್ತು ಕಣ್ಣುಗಳು ಒಮೆಗಾ 3 ಕೊಬ್ಬಿನಾಮ್ಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ ಮತ್ತು ಅವುಗಳ ಆರೋಗ್ಯ ಮತ್ತು ಚಟುವಟಿಕೆಗೆ ಈ ಪೋಷಕಾಂಶಗಳು ಅತೀ ಅಗತ್ಯ.
ಸರಿಯಾದ ನಿದ್ರೆ:
ಸರಿಯಾಗಿ ನಿದ್ರೆ ಪೂರ್ತಿಯಾಗದಿದ್ದರೆ ನಿಯಮಿತವಾಗಿ ಮೀನು ಸೇವಿಸಿ. ಮೀನಿನಲ್ಲಿರುವಂತಹ ಉನ್ನತ ಮಟ್ಟದ ವಿಟಮಿನ್ ಡಿ ನಿದ್ರೆ ಸರಾಗವಾಗಿ ಆಗುವಂತೆ ಮಾಡುವುದು.
ಉತ್ತಮ ಚರ್ಮ ಮತ್ತು ಕೂದಲು ಬೆಳೆಯಲು ಸಹಕಾರಿ:
ಮೀನು ಸೇವನೆಯಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ. ಇದರಲ್ಲಿರುವ ಕಡಿಮೆ ಕೊಬ್ಬಿನ ಅಂಶಗಳು ಮತ್ತು ಉತ್ತಮ ಕೊಬ್ಬಿನಾಮ್ಲಗಳು ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆದು ಹೊಳಪು ನೀಡುತ್ತದೆ.
ಸಂಧಿವಾತ ಕಡಿಮೆ ಮಾಡುವುದು:
ನೀವು ಸಂಧಿವಾತದಿಂದ ಬಳಲುತ್ತಿದ್ದರೆ ದಿನನಿತ್ಯ ಮೀನಿನ ಸೇವನೆ ಮಾಡಿ. ಸಂಧಿವಾತವು ಗಂಟುಗಳ ತೀವ್ರವಾದ ಉರಿಯೂತವಾಗಿದ್ದು, ನಿಯಮಿತವಾಗಿ ಮೀನು ಸೇವಿಸಿದರೆ ಅದರಿಂದ ನೋವು ಮತ್ತು ಊತ ಕಡಿಮೆ ಮಾಡಬಹುದು.
ಕೊಲೆಸ್ಟ್ರಾಲ್ ತಗ್ಗಿಸುವುದು:
ಮೀನು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೀನಿನಲ್ಲಿ ಇರುವಂತಹ ಒಮೆಗಾ 3 ಕೊಬ್ಬಿನಾಮ್ಲವು ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು.
ಮಧುಮೇಹ ತಗ್ಗಿಸುವುದು:
ಟೈಪ್ 1 ಮಧುಮೇಹವನ್ನು ಮೀನು ತಗ್ಗಿಸುವುದು. ಮೀನಿನಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಡಿ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಗ್ಲುಕೋಸ್ ಚಯಾಪಚಯಕ್ಕೆ ನೆರವಾಗುವುದು.

Friday, March 27, 2020

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

Bring back good health in the world


ಜಗತ್ತಿನಲ್ಲಿ ಹಲವಾರು ವರ್ಷಗಳಿಗೊಮ್ಮೆ ಬರುವ ಮಹಾಮಾರಿಗಳು ಜನಸಮುದಾಯದ ಸ್ವಾಸ್ಥ್ಯವನ್ನು ಅಲ್ಲಾಡಿಸುತ್ತವೆ. ಇಂಥ ಸಂದರ್ಭದಲ್ಲೆಲ್ಲ ಮನುಷ್ಯನ ದೇಹಬಲ, ಹಣಬಲ ಎಲ್ಲವೂ ಹಿಂದಕ್ಕೆ ಸರಿದು “ಎಲ್ಲವೂ ನನ್ನ ಕೈಯಲ್ಲಿಲ್ಲ’ ಎಂಬ ಅರಿವು ಅವನಿಗೆ ಉಂಟಾಗುತ್ತದೆ. ಮನುಷ್ಯನಅಹಂ-ಕಾರವನ್ನು ಕಳೆಯಲೆಂದೇ ಈ ಮಹಾಮಾರಿಗಳು ಬಂದಿವೆ ಎಂಬುದು ಕೊಂಚ ಭಾವುಕ ಹೇಳಿಕೆಯಾದರೂ ಇದನ್ನು ಫಿಲಾಸಫಿಕಲ್‌ ಆಗಿ ಸ್ವೀಕರಿಸುವುದೇ ಹೆಚ್ಚು ಸೂಕ್ತ!
Ringa ringa a rosses,
Pocket full of posies
Husha busha
We all fall down
ಈ ನರ್ಸರಿ ರೈಮ್ಸ್‌ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ಮಕ್ಕಳು ತುಂಬ ಖುಷಿಯಿಂದ ಇದನ್ನು ಹಾಡಿ, ಕುಣಿದು ಸಂಭ್ರಮಿಸುತ್ತಾರೆ. ಆದರೆ, ಇದರ ಹಿಂದೊಂದು ದಾರುಣವಾದ ಕತೆ ಇದೆ ಎಂದು ಎಷ್ಟು ಮಂದಿಗೆ ತಿಳಿದಿದೆ!
ಇದು ಯುರೋಪಿನಲ್ಲಿ ಪ್ಲೇಗ್‌ ಮಹಾಮಾರಿಯ ಮರಣ ಮೃದಂಗಕ್ಕೆ ಅಸಂಖ್ಯಾತ ಜನರು ಬಲಿಯಾಗುತ್ತಿದ್ದಾಗ ಕಟ್ಟಿದ ಹಾಡು! ಕಣ್ಣಿನ ಸುತ್ತ ಕಪ್ಪು ಸುತ್ತುವರಿಯುತ್ತಿದೆ. ದೇಹದ ದುರ್ನಾತವನ್ನು ತಡೆಯಲು ಜೇಬಿನಲ್ಲಿ ಸುಗಂಧ ಪುಷ್ಪವನ್ನಿರಿಸಿಕೊಂಡು ಕೊನೆಗೂ ಸೋಂಕಿಗೆ ಬಲಿಯಾಗುವ ಹಾಡು ಇದಾಗಿದೆ. ಪ್ಲೇಗ್‌ ಕಾಯಿಲೆಯನ್ನು “ಬ್ಲಾಕ್‌ ಡೆಡ್‌’ ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಮೈಯಲ್ಲಿ ಕಪ್ಪಾಗುತ್ತ ಹೋಗುತ್ತಿದ್ದುದು! 14ನೆಯ ಶತಮಾನದಲ್ಲಿ ಯುರೋಪಿನ ಮೂರನೆಯ ಒಂದು ಭಾಗದಷ್ಟು ಅಂದರೆ ಸುಮಾರು ಏಳೂವರೆ ಕೋಟಿಯಷ್ಟು ಜನರನ್ನು ಈ ರೋಗ ಬಲಿ ತೆಗೆದುಕೊಂಡಿತ್ತು. ಪ್ಲೇಗ್‌ ಎಂಬ ಹೆಸರು ಕೇಳಿದರೇ ಜನರಲ್ಲಿ ನಡುಕ ಉಂಟಾಗುತ್ತಿತ್ತು.
ಷೇಕ್ಸ್‌ಪಿಯರ್‌ನ ರೋಮಿಯೊ ಆ್ಯಂಡ್‌ ಜೂಲಿಯೆಟ್‌ ನಾಟಕದಲ್ಲಿ ಗಾಯಗೊಂಡ ಮರ್ಕುಶಿಯೊ ಕಲಹದಲ್ಲಿದ್ದ ನಿಮ್ಮ ಕುಟುಂಬಕ್ಕೆ “ನಿಮ್ಮ ಮನೆಗೆ ಪ್ಲೇಗ್‌ ರೋಗ ಅಂಟಿಕೊಳ್ಳಲಿ’ ಎಂದು ಶಪಿಸುತ್ತಾನೆ. ಈ ನಾಟಕವನ್ನು ಜನ ಡೈಲಾಗನ್ನು ಕೇಳಿ ನಡುಗುತ್ತಿದ್ದರಂತೆ. ಪ್ಲೇಗ್‌ ರೋಗವನ್ನು ತಡೆಯಲು ಸರಿಯಾದ ಕಾರಣ ತಿಳಿಯಲಾರದೆ ಇಲ್ಲ-ಸಲ್ಲದ ಪ್ರಯತ್ನಗಳನ್ನು ಮಾಡಿದರು.
ಸಿಸಿಲಿ ನಗರದಿಂದ ಬಂದಿದ್ದ ಹಡಗೊಂದರಲ್ಲಿ ಪ್ಲೇಗ್‌ ರೋಗದಿಂದ ಸತ್ತವರು ಅನೇಕರು ಇದ್ದರು. ಹಾಗಾಗಿ, ಬದುಕುಳಿದವರನ್ನು ಕೂಡ ಆ ಹಡಗಿನಿಂದ ಇಳಿಯಲು ಬಿಡಲಿಲ್ಲ. ಆದರೆ, ಹಡಗಿಗೆ ಕಟ್ಟಿದ ಹಗ್ಗದ ಮೂಲಕ ಇಲಿಗಳು ನಗರವನ್ನು ಪ್ರವೇಶಿಸಿ ಇಡೀ ನಗರವನ್ನು ಕಂಗೆಡಿಸಿದವು.
ಪ್ಲೇಗ್‌ ರೋಗ 1347ರಲ್ಲಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಕಂಡುಬಂತು. ಅದು ಬಳಿಕ ಯುರೋಪಿನ ಇತರ ರಾಷ್ಟ್ರಗಳತ್ತ ಹರಡಿತ್ತು. ಅಂದು ಕಾಯಿಲೆ ವರ್ಷಕ್ಕೆ 200ರಿಂದ 400 ಕಿ.ಮೀ. ವೇಗದಲ್ಲಿ ಹರಡಿತ್ತು. ಇಂದು ಕೊರೊನಾ ಸೋಂಕು ಎರಡೂವರೆ ತಿಂಗಳಲ್ಲಿ 164 ದೇಶಗಳಿಗೆ ಹರಡಿ 2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಉಂಟುಮಾಡಿದೆ. ಸುಮಾರು ಎಂಟೂವರೆ ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ಗಂಟೆಗೆ ಸುಮಾರು 500 ಮೈಲು ವಿಮಾನದ ಮೂಲಕ ಹರಡಿಕೊಂಡಿದೆ. ಹೇಳಿಕೇಳಿ ನಮ್ಮದು ನೆಟ್‌ವರ್ಕ್‌ ಯುಗ.
ಕಷ್ಟದ ಹಾದಿ ಇದೇ ಮೊದಲಲ್ಲ
ಸಾಂಕ್ರಾಮಿಕ ರೋಗಗಳ ಮರಣಮೃದಂಗ ಆರ್ಭಟದಲ್ಲಿ ಸ್ಪಾನಿಷ್‌ ಫ್ಲ್ಯೂವನ್ನು ಮೀರಲು ಇತರ ರೋಗಗಳಿಗೆ ಸಾಧ್ಯವಾಗಿಲ್ಲ. ಮೂರನೆಯ ಮಹಾಯುದ್ಧಕ್ಕೂ ಸತ್ತವರ ಸಂಖ್ಯೆ 2 ಕೋಟಿ ಆದರೆ, ಸ್ಪಾನಿಷ್‌ ಫ್ಲ್ಯೂ , 5ರಿಂದ 10 ಕೋಟಿ ಜನರನ್ನು ಬಲಿ ತೆಗೆದುಕೊಂಡಿದೆ. ಯುದ್ಧದ ಸಾವಿನ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ಸ್ಪಾನಿಷ್‌ ಫ್ಲ್ಯೂವಿನ ಅಧ್ವಾನ ಮರೆತೇ ಹೋಗಿದೆ. ಯುರೋಪಿಯನ್ನರ ವಸಾಹತುಶಾಹಿ ಆವಾಂತರಕ್ಕೆ ದೇವರು ಕೊಟ್ಟ ಶಾಪ ಈ ರೋಗ ಎಂದಿದ್ದರು ಮಹಾತ್ಮಾಗಾಂಧಿ. ಆದರೆ, ಅದು ಭಾರತಕ್ಕೆ 1918ರಲ್ಲಿ ಮುಂಬೈಗೆ ಅಪ್ಪಳಿಸಿ 2 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಅಂದರೆ ಶೇ. 10ರಷ್ಟು ಭಾಗದ ಜನಸಂಖ್ಯೆ.
ಎಚ್‌ಐವಿ, ಏಡ್ಸ್‌ ಕಾಯಿಲೆ ಜಗತ್ತಿನ 3 ಕೋಟಿ ಜನರನ್ನು ಸಾವಿಗೀಡು ಮಾಡಿದೆ. ಇದು 3 ದಶಕಗಳಿಂದ ಭೂಮಿಯ ಮೇಲೆಯೇ ಇದೆ. ಸುನಾಮಿಯಂತೆ ಒಮ್ಮೆ ಬಂದುಹೋದದ್ದಲ್ಲ. ಇಂಥ ರೋಗವನ್ನು ಎಂಡಮಿಕ್‌ ಕಾಯಿಲೆ ಎನ್ನುತ್ತಾರೆ. ಇವು ನಿರಂತರವಾಗಿ ಕಾಡುವ ಕಾಯಿಲೆಗಳಾಗಿವೆ. ಸ್ಥಳೀಯವಾಗಿ ಅಥವಾ ಒಂದು ಪ್ರದೇಶದ ಒಳಗೆ ಅಥವಾ ಒಂದು ದೇಶದ ಒಳಗೆ ಹರಡುವ ಕಾಯಿಲೆಯನ್ನು ಎಪಿಡಮಿಕ್‌ ಎನ್ನುತ್ತಾರೆ. ಇಡೀ ಜಗತ್ತಿಗೆ ಹರಡುವ ಕಾಯಿಲೆಯನ್ನು ಪ್ಯಾಂಡಮಿಕ್‌ ಎನ್ನುತ್ತಾರೆ. ಈಗ ಕೋವಿಡ್‌-19 ಒಂದು ಪ್ಯಾಂಡಮಿಕ್‌ ಕಾಯಿಲೆ ಆಗಿ ಪರಿಣಮಿಸಿದೆ.
ಈ ಹಿಂದೆ ಹಾಂಕಾಂಗ್‌ನಲ್ಲಿ ಹಾಂಕಾಂಗ್‌ ಫ್ಲ್ಯೂ ಕಾಣಿಸಿಕೊಂಡಿತ್ತು. ಅದರಿಂದ ಸುಮಾರು 7 ಲಕ್ಷ ಜನ ಮೃತಪಟ್ಟಿದ್ದರು. ಅದಕ್ಕೆ ಕಾರಣ ಸರಳ. ಹಾಂಕಾಂಗ್‌ನಲ್ಲಿ ಜನ ಅತ್ಯಂತ ಸಾಂದ್ರವಾಗಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಾರೆ. ಪುಟ್ಟ ಕೊಠಡಿಯಲ್ಲಿ ಅತ್ಯಂತ ಹೆಚ್ಚು ಜನ ಇರುತ್ತಾರೆ. ಸ್ವಚ್ಛತೆ ಕಡಿಮೆ. ಈ ಫ್ಲ್ಯೂವಿಗೆ ಕಾರಣವಾದ ವೈರಸ್‌ ಎಚ್‌3 ಎನ್‌2 ಎಂದು ಹೇಳಲಾಗಿದೆ. ಇತ್ತೀಚೆಗೆ ಎಚ್‌1 ಎನ್‌1, ಎಚ್‌5 ಎನ್‌1, ಎಚ್‌7 ಎನ್‌7, ಎಚ್‌ 7 ಎನ್‌9- ಹೀಗೆ ಸರಣಿ ಮುಂದುವರಿಯುತ್ತದೆ. ಇತ್ತೀಚೆಗೆ ಫಿಲಿಫೈನ್ಸ್‌ ದೇಶದಲ್ಲಿ ಎಚ್‌5 ಎನ್‌6 ಎಂಬ ಹೊಸ ವೈರಾಣುವಿನೊಂದಿಗೆ ಹಕ್ಕಿಜ್ವರ ರೋಗವು ಫಿಲಿಫೈನ್ಸ್‌ ದೇಶದಲ್ಲಿ ಕಾಣಿಸಿಕೊಂಡಿದೆ.
ವೈರಾಣು ಬೇರೆ, ಬ್ಯಾಕ್ಟೀರಿಯಾ ಬೇರೆ
ಎಚ್‌ ಮತ್ತು ಎನ್‌ ವೈರಾಣುವಿನಲ್ಲಿರುವ ಪ್ರೊಟೀನ್‌ ಆಧಾರದ ಮೇಲೆ ಅವುಗಳನ್ನು ಗುರುತಿಸಲಾಗುತ್ತದೆ. ಸುಮಾರು ಎಚ್‌1ರಿಂದ ಎಚ್‌ 16ರವರೆಗೆ ಲೆಕ್ಕಹಾಕಲಾಗಿದೆ. ಹಾಗೆಯೇ ಎನ್‌ ಪ್ರೊಟೀನ್‌ಅನ್ನು 1ರಿಂದ 9ರ ವರೆಗೆ ಇರುವ ಬಗೆಯನ್ನು ಗಮನಿಸಲಾಗಿದೆ. ಇದರ ಜೊತೆಗೆ ನಡುಕ ಹುಟ್ಟಿಸುವಂಥ ಅದೆಷ್ಟು ರೋಗಾಣುಗಳಿವೆ! ಎಬೋಲಾ, ಝೀಕಾ, ಮರ್ಸ್‌, ಸಿಫಾ, ಹಿಂಡ್ರಾ, ಲೆಸ್ಟ್‌ನೈಲ್‌ ಮತ್ತು ಮಲೆನಾಡಿನಲ್ಲಿ ಕಂಡುಬರುವ ಮಂಗನಕಾಯಿಲೆಯೂ ಅದೇ ರೀತಿಯದ್ದು. ಲೈಮ್‌ ಡಿಸೀಸ್‌ ಅಂತ ಒಂದಿದೆ. ಅದು ಉಣ್ಣಿಯ ಮೂಲಕ ಹರಡುತ್ತದೆ. ಉಣ್ಣಿಗಳು ಬದುಕಿ ಉಳಿಯಲು ಇಲಿಗಳು ಬೇಕು. ಇಲಿಗಳ ಸಂಖ್ಯೆ ಜಾಸ್ತಿ ಇದ್ದಲ್ಲಿ ಉಣ್ಣಿಗಳ ಸಂಖ್ಯೆ ವೃದ್ಧಿಸಿ ರೋಗ ಹರಡುವುದು. ಹಾಗಾಗಿ, ನರಿಗಳ ಸಂಖ್ಯೆ ಅಧಿಕವಿದ್ದಲ್ಲಿ ಇಲಿಗಳ ನಿಯಂತ್ರಣ ಸಾಧ್ಯವಂತೆ! ಯುರೋಪಿನಲ್ಲಿ ಮೋಜಿಗಾಗಿ ನರಿಗಳನ್ನು ಬೇಟೆಯಾಡುವ ಪರಿಪಾಠ ಉಂಟಾಯಿತಂತೆ. ಆಗ ಇಲಿಗಳ ಸಂಖ್ಯೆ ಜಾಸ್ತಿಯಾಗಿ ಯುರೋಪಿನಲ್ಲಿ ಲೈಮ್‌ ರೋಗ ಹರಡಿತ್ತು. ಈಗ ಸಮಸ್ಯೆ ಆಗುತ್ತಿರುವ ಮುಂದಿನ ಕಾಯಿಲೆಯ ಹರಡುವಿಕೆಗೂ ಏನಾದರೂ ಕಾರಣವಿರಬಹುದೆ ಎಂಬುದನ್ನು ಸಂಶೋಧಿಸಲಾಗಿದೆ.
ಕೊರೋನಾ, ಮರ್ಸ್‌, ನಿಫಾದಂಥ ಕಾಯಿಲೆಗಳ ಮೂಲ ಬಾವಲಿ ಎಂಬುದು ಗಮನಾರ್ಹ ವಿಚಾರ. ಬಾವಲಿಗಳು ವೈರಾಣುಗಳಿಗೆ ಆಶ್ರಯವಾದದ್ದು ಒಂದು ಅಚ್ಚರಿಯ ಸಂಗತಿ. ಹಾಗೆಂದು ಈ ಬಾವಲಿಗಳಿಗೆ ಈ ವೈರಾಣುಗಳಿಂದ ರೋಗ ತಟ್ಟದಿರುವುದು ಆಶ್ಚರ್ಯವೇ ಸರಿ.
ಸಂಯಮ ಕಲಿಸುತ್ತಿರುವ ಕೋವಿಡ್-19
ಇದೀಗ ಕೋವಿಡ್-19 ಎಂಬ ಮಹಾಮಾರಿ ಭಯ ಹುಟ್ಟಿಸುತ್ತಿದೆ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕಂಡು ಭಯ ಬೀಳುವ ಅಗತ್ಯವೇನೂ ಇಲ್ಲ. ಹಾಗೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ.  ಕೋವಿಡ್-19 ಮೂಲಕ ಹರಡುವ ರೋಗವಾದ್ದರಿಂದ ಅದರ ಸ್ವಭಾವವನ್ನು ಅರಿತು ಔಷಧಿಯನ್ನು ಕಂಡುಹಿಡಿಯುವುದು ಸುಲಭವಲ್ಲ. ಅದಾಗ್ಯೂ ಔಷಧಿಯನ್ನು ಕಂಡುಹಿಡಿದರೂ, ಅವುಗಳನ್ನು ಇತರ ಜೀವಿಗಳ ಮೇಲೆ ಪ್ರಯೋಗಿಸಿ, ಯಶಸ್ವಿಯಾದರೆ ಮೊದಲ ಹಂತದಲ್ಲಿ ಮನುಷ್ಯನ ಮೇಲೆ ಪ್ರಯೋಗಿಸಿ, ಯಶಸ್ವಿಯಾದ ಮೇಲಷ್ಟೇ ಸಾರ್ವಜನಿಕ ಮಾರುಕಟ್ಟೆಗೆ ಅವುಗಳನ್ನು ಸರಬರಾಜು ಮಾಡಬಹುದು. ಇದು ಬಹಳ ದೀರ್ಘ‌ವಾದ ಪ್ರಕ್ರಿಯೆ. ಔಷಧಿ ಕಂಡುಹಿಡಿಯುವ ವೇಳೆಗೇ ಈ ರೋಗ ಜಗತ್ತಿನಿಂದ ಮಾಯವಾಗಲೂಬಹುದು ಅಥವಾ ಅದು ಬೇರೆಯದೇ ಸ್ವರೂಪವನ್ನೂ ಪಡೆದುಕೊಳ್ಳಬಹುದು. ಆದ್ದರಿಂದಲೇ ಮುನ್ನೆಚ್ಚರಿಕೆ ಕ್ರಮವೇ ಉತ್ತಮ ಔಷಧಿ. ಯಾಕೆಂದರೆ ಕೊರೊನಾ ವೈರಸ್‌ ಅತ್ಯಂತ ದುರ್ಬಲವಾದುದು. ಗಾಳಿಯಲ್ಲಿ ಹೆಚ್ಚು ಹೊತ್ತು ಬಾಳಲಾರದು. ರೋಗನಿರೋಧಕ ಶಕ್ತಿ ಸಮರ್ಥವಾಗಿದ್ದಾಗ ಅದು ದೇಹವನ್ನು ಘಾಸಿ ಮಾಡುವುದಿಲ್ಲ. ಇತರ ಮಾರಣಾಂತಿಕ ರೋಗಗಳು ದೇಹದ ಎಲ್ಲ ಅಂಗಗಳನ್ನು ಏಕಕಾಲಕ್ಕೆ ಘಾಸಿ ಮಾಡಿದಂತೆ, ಕೊರೋನಾ ದೇಹದ ಎಲ್ಲ ಅಂಗಗಳ ಮೇಲೆ ಧಾಳಿ ಮಾಡುವುದಿಲ್ಲ. ಅದು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಆದರೆ, ಉತ್ತಮ ರೋಗನಿರೋಧಕ ಶಕ್ತಿ ಇದ್ದರೆ, ಅದು ಔಷಧಿಯಿಂದ ಗುಣವಾಗಬಲ್ಲದು. ಸಾಮಾನ್ಯ ವಾಗಿ ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ತುಸು ಹೆಚ್ಚೇ ಎನ್ನಬಹುದು. ಸದ್ಯಕ್ಕೆ ಧೈರ್ಯವೇ ನಮ್ಮ ಮುಂದಿರುವ ಸಾಧನ.
ಕೆ. ಸಿ. ರಘು